Tuesday 12 August 2014

ಸಾಕ್ಷರ ಕಾರ್ಯಕ್ರಮವನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶಂಕರನಾರಾಯಣ ರವರು ಉದ್ಘಾಟನೆ ಮಾಡಿದರು.... ಶಾಲಾ ಮುಖ್ಯೋಪಧ್ಯಾಯ ಉಮೇಶ ರವರು ಉಪಸ್ಥಿತರಿದ್ದರು.... S R G ಕನ್ವೀನರ್ ಸ್ವರ್ಣಲತ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು......



 ಶಾಲಾ ಪಿ.ಟಿ.ಎ ಅಧ್ಯಕ್ಷರಿಂದ ಮೊದಲ ತರಗತಿ........

Friday 1 August 2014

 ಬ್ಲಾಗ್ ಚರಿತ್ರೆ



ಬ್ಲಾಗ್ (ವೆಬ್ಲಾಗ್ ಎಂಬುದರ ಹ್ರಸ್ವ ರೂಪ) ಅಂತರ್ಜಾಲದ ಒಂದು ವಿಧವಾಗಿದ್ದು, ಸಾಮಾನ್ಯವಾಗಿ ಪ್ರತ್ಯೇಕ ಖಾಸಗಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುವ ತಾಣವಾಗಿರುತ್ತದೆ. ಇದರಲ್ಲಿ ಪ್ರತಿಕ್ರಿಯಾತ್ಮಕ ಲೇಖನಗಳು, ಕಾರ್ಯಕ್ರಮಗಳ ವಿವರಣೆ, ಗ್ರಾಫಿಕ್ಸ್, ವಿಡಿಯೋ ಮೊದಲಾದವುಗಳನ್ನು ನಿರಂತರವಾಗಿ ದಾಖಲಿಸಲಾಗುತ್ತದೆ. ಹೀಗೆ ದಾಖಲಿಸಲಾಗುವ ಲೇಖನಗಳು ಸಾಮಾನ್ಯವಾಗಿ ಹಿಮ್ಮುಖ ಕ್ರಮಾಂಕದಲ್ಲಿ ಪ್ರದರ್ಶನಗೊಳ್ಳುತ್ತವೆ. “ಬ್ಲಾಗ್" ಎಂಬ ಪದವನ್ನು ಕ್ರಿಯಾಪದವಾಗಿ ಬಳಸುವುದು ಕೂಡ ಈಗ ಚಾಲ್ತಿಯಲ್ಲಿದ್ದು, ಬ್ಲಾಗ್ ಗೆ ಲೇಖನವನ್ನು ಸೇರಿಸುವುದು ಅಥವಾ ನಿರ್ವಹಿಸುವುದು ಎಂಬ ಅರ್ಥವನ್ನು ಅದು ನೀಡುತ್ತದೆ.
ಬಹುತೇಕ ಬ್ಲಾಗ್‌ಗಳು ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವ್ಯಾಖ್ಯಾನ ಅಥವಾ ಮಾಹಿತಿ ನೀಡುವವಾಗಿದ್ದರೆ, ಮತ್ತೆ ಕೆಲವು ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳಲು ತೆರೆಯಲ್ಪಟ್ಟವಾಗಿದ್ದು, ಜಾಲತಾಣದ ದಿನಚರಿಗಳಂತೆ ಇರುತ್ತವೆ.ಒಂದು ಪರಿಪೂರ್ಣ ಬ್ಲಾಗ್‌ನಲ್ಲಿ ಪಠ್ಯ, ಚಿತ್ರಗಳು ಹಾಗೂ ತನ್ನ ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಇತರ ಬ್ಲಾಗ್‌ಗಳ, ಜಾಲಪುಟಗಳ ಮತ್ತು ಮಾಧ್ಯಮಗಳ ಸಂಪರ್ಕ ಕೊಂಡಿಗಳು ಸಂಯೋಜನೆಗೊಂಡಿರುತ್ತವೆ.ಓದುಗರೊಂದಿಗೆ ಚರ್ಚೆ ಸಾಧ್ಯವಾಗುವಂತೆ ರೂಪಿಸಲ್ಪಟ್ಟ ಪ್ರತಿಕ್ರಿಯಿಸುವ ಅವಕಾಶವನ್ನು ಕಮೆಂಟ್ ಬಾಕ್ಸ್ ಮೂಲಕ ಕಲ್ಪಿಸಲಾಗಿದ್ದು, ಬಹುತೇಕ ಬ್ಲಾಗ್‌ಗಳಿಗೆ ಇದು ಅತಿ ಪ್ರಮುಖ ಅಂಗವಾಗಿರುತ್ತದೆ. ಬಹುತೇಕ ಬ್ಲಾಗ್‌ಗಳು ಲೇಖನಗಳಿಗೆ ಸೀಮಿತವಾಗಿದ್ದರೂ ಕಲೆಗೆ ತೆರೆದುಕೊಂಡ ಆಟ್ ಲಾರ್ಗ್, ಛಾಯಾಚಿತ್ರಗಳನ್ನು ಮುಖ್ಯ ವಸ್ತುವಾಗುಳ್ಳ ಪೋಟೊ ಬ್ಲಾಗ್ ರೇಖಾಚಿತ್ರಗಳ ಸ್ಕೆಚ್ ಬ್ಲಾಗ್ ವಿಡಿಯೋಗಳನ್ನು ಪ್ರದರ್ಶಿಸುವ ವ್ಲಾಗ್ ಅಥವಾ ವಿಲಾಗ್, ಸಂಗೀತದ MP3,ಬ್ಲಾಗ್ ಮತ್ತು ವಿವಿಧ ಧ್ವನಿ ಮುದ್ರಣಗಳ ಪೋಡ್ ಕ್ಯಾಸ್ಟ್ ಎಂಬ ವಿಧಗಳೂ ಬ್ಲಾಗ್ ವ್ಯಾಪ್ತಿಯಲ್ಲಿವೆ.ಮೈಕ್ರೋಬ್ಲಾಗಿಂಗ್ , ಬ್ಲಾಗಿಂಗ್ ನ ಮತ್ತೊಂದು ವಿಧವಾಗಿದ್ದು, ಅತಿ ಚಿಕ್ಕ ಲೇಖನ(ಪೋಸ್ಟ್)ದ ಕೂಗಳಿಂಡಿರುತ್ತದೆ.


  ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.......