ABOUT US

            ವಿದ್ಯಾರಣ್ಯ ಎ.ಎಲ್.ಪಿ.ಶಾಲೆ ಬೆರಿಪದವು

ಅಪ್ರತಿಮ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರೆವ ಕೇರಳ ರಾಜ್ಯದ,ಕಾಸರಗೋಡು ಜಿಲ್ಲೆಯ, ಬಾಯಾರು ಗ್ರಾಮದ ಬೆರಿಪದವಿನಲ್ಲಿ ಕಾರ್ಯವೆಸಗುತ್ತಿರುವ ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಅನೇಕ ವ್ಯಕ್ತಿಗಳ ಸಾಮಾಜಿಕ ಕೊಡುಗೆಯಾಗಿದೆ.
ಶೈಕ್ಷಣಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪ್ರದೇಶವಾಗಿದ್ದ "ಬೆರಿಪದವು" ನೂರಾರು ವರ್ಷಗಳ ಹಿಂದೆ ಹೆಸರಿನಂತೆ "ಪದವು" ಆಗಿತ್ತಂತೆ !!
ಅಂದು 1954 ರಲ್ಲಿ ಶ್ರೀ ವಿದ್ವಾನ್ ಕೃಷ್ಣ ಭಟ್ ರವರಿಂದ "ಶ್ರೀ ಕೃಷ್ಣ ಎ.ಎಲ್.ಪಿ ಶಾಲೆ" ಎ೦ಬ ಹೆಸರಲ್ಲಿ ಆರಂಭಿಸಲ್ಪ಼ಟ್ಟು ಜನರಿಗೆ ವಿದ್ಯಾದಾನ ಮಾಡಲು ಆರಂಭಿಸಿತು. ನಂತರ ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು. ನಂತರ ಶ್ರೀಗೋವಿಂದ ಭಟ್ ಮತ್ತು ಶ್ರೀ ಚಂದ್ರಶೇಖರ ಭಟ್ ರು ಊರವರ ಸಹಕಾರದಿಂದ ತಾಳ್ತಜೆ ಶ್ರೀಕೃಷ್ಣ ಭಟ್ ರ ಆಡಳಿತದಲ್ಲಿ ಪುನರಾರಂಭಿಸಿದರು.
ಮೊದಲಿಗೆ ಅಂದರೆ 1976 ಸಪ್ಟೆಂಬರ್ 28 ರಂದು 52 ಮಕ್ಕಳನ್ನೊಳಗೊಂಡ ಒಂದನೇ ತರಗತಿ ಅಂದಿನ ಮಂಜೇಶ್ವರ ವಿದ್ಯಾಧಿಕಾರಿ ಶ್ರೀ ಗುರುರಂಗಯ್ಯ ಬಲ್ಲಾಳ ರ ಸಹಾಯ ತೆರೆಯಲ್ಪಟ್ಟಿತು. ಇದನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ವಿ.ಡಿ.ಜಾರ್ಜ್ ರವರು ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಎ೦ಬ ಹೆಸರಿನಿಂದ ಉದ್ಘಾಟನೆ ಮಾಡಿದರು.ನಂತರ ಶ್ರೀ ಚಂದ್ರಶೇಖರ ಭಟ್ ಸಹಾಯಕ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ಹೀಗೆ ಮುಂದಿನ ವರ್ಷಗಳಲ್ಲಿ ಅರೆಬಿಕ್ ತರಗತಿಗೆ ಶ್ರೀ ಕುಂಞಿ ಸೀದಿಕೋಯ ತಂಙಳ್, ರಾಘವ ಎನ್, ಕಮಲ ಟಿ ರವರು ನಿಯುಕ್ತಿಗೊಂಡರು. ಇಂದು ಶಾಲೆ ಊರವರ ಪೂರ್ಣ ಸಹಾಯದಿಂದ ಯಶಸ್ವಿಯಾಗಿ ಮುಂದುವರೆಯುತ್ತಿದೆ.

1 comment: