Vitamins...
ಭಾರತದ ರಾಷ್ಟ್ರಗೀತೆ ಮತ್ತು ರಾಷ್ಟ್ರಕವಿತೆ
ರಾಷ್ಟ್ರಗೀತೆಜನಗಣಮನಬರೆದವರುರವೀಂದ್ರನಾಥ ಠ್ಯಾಗೂರ್ಅಳವಡಿಸಿಕೊಂಡದ್ದುಜನವರಿ - 24, 1950
ಮೊದಲು ಹಾಡಿದ್ದುಡಿಸೆಂಬರ್ - 27, 1911
ಯಾವ ಸಂದರ್ಭದಲ್ಲಿ ಮೊದಲು ಹಾಡಿದ್ದು?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕಲ್ಕತ್ತಾ ಅಧಿವೇಶನದಲ್ಲಿ ದೊರೆ ಜಾರ್ಜ - 5ನ್ನು ಆಹ್ವಾನಿಸುವ ಸಂದರ್ಭದಲ್ಲಿ ಹಾಡಿದ್ದರು.
ಈ ಅಧಿವೇಶನದ ಅಧ್ಯಕ್ಷರಾಗಿದ್ದವರು
ಪಂಡಿತ್ ಬಿಸಾನ್ ನಾರಯಣ್ ದಾರ್
ಮೂಲ ರಚಿತ ಭಾಷೆ
ಬಂಗಾಳಿ
ಇಂಗ್ಲೀಷ್ ಗೆ ಭಾಷಾಂತರಿಸಿದವರು
ಠಾಗೂರ್ ಮತ್ತು ಮಾರ್ಗರೇಟ್ ಕಸೀನ್
ಹಾಡಲು ತೆಗೆದುಕೊಳ್ಳುವ ಅವಧಿ
52 ಸೆಕೆಂಡುಗಳು
ರಾಷ್ಟ್ರ ಕವಿತೆ
ವಂದೇ ಮಾತರಂ ಕವಿತೆಯನ್ನು ಭಾರತದ ರಾಷ್ಟ್ರ ಕವಿತೆ ಅಥವಾ ಹಾಡು ಎಂದು ಕರೆಯಲಾಗುತ್ತದೆ. ಈ ವಂದೇ ಮಾತರಂ ಕವಿತೆಯು ಸಂಸ್ಕೃತದಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ಕವಿ ’ಬಂಕಿಮ್ ಚಂದ್ರ ಚಟರ್ಜಿ’ಯವರಿಂದ ರಚಿತವಾಗಿದೆ. ಬಂಕಿಮರು 1882 ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಈ ಕವಿತೆಯು ಇತಿಹಾಸದ ಸ್ವಾತಂತ್ರ್ಯದ ಚಳುವಳಿಯ ಹೋರಾಟಕ್ಕೆ ತುಂಬಾ ಸ್ಪೂರ್ತಿಯ ಕವಿತೆಯಾಗಿತ್ತು. ಈ ಕವಿತೆಯು ಭಾರತದ ರಾಷ್ಟ್ರಗೀತೆಯಾದ ಜನಗಣ ಮನದೊಂದಿಗೆ ಸಮಾನವಾದ ಸ್ಥಾನವನ್ನು ಹೊಂದಿದೆ.
1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಈ ಗೀತೆಯನ್ನು ರವೀಂದ್ರನಾಥ ಠಾಗೂರ್ ಅವರು ಮೊದಲಬಾರಿಗೆ ಹಾಡಿದರು. ಭಾರತವು ಸ್ವತಂತ್ರವಾದ ನಂತರ 1950 ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಹಾಡು ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು. ಇದರ ಮೊದಲ ನುಡಿ ಕೆಳಗಿನಂತಿದೆ.
ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ,
ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ,
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ,
ಸುಖದಾಂ ವರದಾಂ ಮಾತರಂ!
ವಂದೇ ಮಾತರಂ ಸಂಪೂರ್ಣ ಗೀತೆ:-
ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ
ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ
ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!
ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!
ವಿಶ್ವ ಯೋಗ ದಿನಾಚರಣೆ



'ಯೋಗ' ಶಬ್ದ ಸಂಸ್ಕೃತ ಬಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು' 'ಸೇರಿಸು' 'ಕೂಡಿಸು' ಎಂಬ ಆರ್ಥ ಬರುತ್ತದೆ. ಯೋಗವೆಂದರೆ 'ಸಮಾದಿ' 'ಉಪಾಯ' 'ಸಾಧನ' ಎಂಬ ಅರ್ಥವೂ ಬರುತ್ತದೆ.
ಯೋಗದ ಎಂಟು ಅಂಗಗಳು (ಅಷ್ಟಾಂಗಗಳು)
ಯಮ
ನಿಯಮ
ಆಸನ
ಪ್ರಾಣಯಾಮ
ಪ್ರತ್ಯಾಹಾರ
ಧಾರಣ
ಧ್ಯಾನ
ಸಮಾಧಿ


ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. [ವಿಶ್ವ ಯೋಗ ದಿನಾಚರಣೆ ಅಂತಿಮ ತಾಲೀಮು] ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.




ಹೋರಾಟಗಾರರ ಘೊಷಣೆಗಳು
ಸತ್ಯಮೇವ ಜಯತೆ : ಮದನ ಮೋಹನ ಮಾಳವೀಯ,
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ
ತೀರುವೆ - ಬಾಲಗಂಗಾಧರ ತಿಲಕರು,
ಜೈ ಜವಾನ್ ಜೈ ಕಿಸಾನ್ - ಲಾಲ್ ಬಹದ್ದೂರ್ ಶಾಸ್ತ್ರಿ,
ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರಕೊಡುತ್ತೇನೆ,
ದಿಲ್ಲಿ ಚಲೊ ಮತ್ತು ಜೈಹಿಂದ್ - ಸುಭಾಷ್ ಚಂದ್ರ ಬೋಸ್,
ಮಾಡು ಇಲ್ಲವೇ ಮಡಿ - ಗಾಂಧೀಜಿ,
ಸೆಕ್ಯೂರ್ ದಿ ಫ್ರೀಡಂ ಆಫ್ ಇಂಡಿಯಾ ಅಟ್ ಎನಿ ಕಾಸ್ಟ್ -ಅರವಿಂದೋ ಘೋಷ್,
ಇನ್ಕಿಲಾಬ್ ಜಿಂದಾಬಾದ್ - ಭಗತ್ ಸಿಂಗ್.

No comments:
Post a Comment